Index   ವಚನ - 1277    Search  
 
ತನ್ನ ಸಮಯಾಚಾರಕ್ಕೆ ಸಲ್ಲದವರಿಗೆ ಉಪದೇಶವ ಮಾಡುವಾತ ಗುರುವಲ್ಲ, ಮಾಡಿಸಿಕೊಂಬಾತ ಶಿಷ್ಯನಲ್ಲ. ಲಿಂಗವ ಮಾರಿಕೊಂಡುಂಬ ವಾಳಕರು, ಗುರುಲಿಂಗಜಂಗಮಕ್ಕೆ ದೂರಹರು. ಕೂಡಲಚೆನ್ನಸಂಗಯ್ಯಾ ಆ ಇಬ್ಬರಿಗೆಯೂ ನರಕ ತಪ್ಪದು.