Index   ವಚನ - 1281    Search  
 
ತನುಧನಾದಿಗಳ ಮೋಹ ಮಾಣದೆ, ತನ್ನಲ್ಲಿ ನಿಜದ ನೆನಹು ನೆಲೆಗೊಳ್ಳದೆ, ಎನಗೆ ಕುಲಗೋತ್ರಗಳಿಲ್ಲವೆಂದು ಗಳಹುತ್ತ ವಿಧಿನಿಷೇಧವನಾರಯ್ಯದೆ, ಕಂಡಕಂಡಂತೆ ಕುಣಿವ ಮಂದ ಮನುಜರು ಕೆಟ್ಟು ಭ್ರಷ್ಟರಪ್ಪರಯ್ಯಾ. ಅದೇತಕೆಂದಡೆ: ಬೊಮ್ಮವಾನೆಂಬ ಸುಜ್ಞಾನ ನೆಲೆಗೊಳ್ಳದಾಗಿ. ಅರಸಿನ ಹೆಸರಿನ ಅನಾಮಿಕಂಗೆ, ಅರಸೊತ್ತಿಗೆಯ ಸಿರಿ ದೊರೆಯದಂತೆ ಮಾಯಾ ಜಲಧಿಯಲ್ಲಿ ಮುಳುಗಿದ ಮರುಳುಮಾನವಂಗೆ ಪರಮಸುಖವೆಂತು ದೊರೆವುದಯ್ಯಾ ಕೂಡಲಚೆನ್ನಸಂಗಮದೇವಾ?