Index   ವಚನ - 1280    Search  
 
ತನು ಗುರುವಿನಲ್ಲಿ ಸವೆದು, ಮನ ಲಿಂಗದಲ್ಲಿ ಸವೆದು, ಧನ ಜಂಗಮದಲ್ಲಿ ಸವೆದು, ತನುವೆ ಗುರುವಾಗಿ, ಮನವೆ ಲಿಂಗವಾಗಿ, ಧನವೆ ಜಂಗಮವಾಗಿ- ಇಂತೀ ತ್ರಿವಿಧ ಐಕ್ಯವಾಗಿ ನಿಮ್ಮಲ್ಲಿ ನಿಂದನಾಗಿ, ಕಾಯವಿಡಿದು ಕರ್ಮವಿರಹಿತನಾದ, ಕೂಡಲಚೆನ್ನಸಂಗಮದೇವರಲ್ಲಿ ಸಂಗನಬಸವಣ್ಣನು ಉಪಮಾತೀತನಾಗಿರ್ದನು.