Index   ವಚನ - 1290    Search  
 
ತನು ಶುದ್ಧವಾಯಿತ್ತು ಗುರುವಿನಿಂದೆ, ಮನ ಶುದ್ಧವಾಯಿತ್ತು ಲಿಂಗದಿಂದೆ, ಧನ ಶುದ್ಧವಾಯಿತ್ತು ಜಂಗಮದಿಂದೆ, ಪ್ರಾಣ ಶುದ್ಧವಾಯಿತ್ತು ಪ್ರಸಾದದಿಂದೆ, ಇಂತೀ ಚತುರ್ವಿಧದಿಂದೆನ್ನ ಸರ್ವಾಂಗ ಶುದ್ಧವಾಯಿತ್ತು ಕೂಡಲಚೆನ್ನಸಂಗಮದೇವಾ.