Index   ವಚನ - 1291    Search  
 
ತನು ಸ್ವಾಯತವಾಗಿ ತನುವಿನ ಹಂಗಿನ ಗುರುವೆನ್ನದೆ, ಗುರುಸ್ವಾಯತವಾಗಿ ಗುರುವಿನ ಹಂಗಿನ ತನುವೆನ್ನದೆ, ತನ್ನೊಳಗೆ ಗುರು ಐಕ್ಯವೆನ್ನದೆ, ಗುರುವಿನೊಳಗೆ ತಾನೈಕ್ಯವೆನ್ನದೆ, ಅವಿರಳ ಸಂಭಾವನೆಯಿಂದ ಸುಬುದ್ಧಿ ನಿಷ್ಠೆ ಅಣುಮಾತ್ರ ಓಸರಿಸದೆ, ರಸಮುಖಾರ್ಪಿತ ತೃಪ್ತನಾಗಿ, ಕಾಯಾಧಾರಲಿಂಗೋಪ,ಜೀವಿಯಾಗಿ, ಸ್ಥಾವರದಂತೆ ನಿಬ್ಬೆರಗಾಗಿ, ತನು ಸೋಂಕಿ ತನು ನಷ್ಟವಾಗಿ ಒಂದು ಮುಖಮಾರ್ಗವಲ್ಲದೆ ಮತ್ತೊಂದ ಮೆಟ್ಟದಿರಬಲ್ಲಡಾತ ಮಹೇಶ್ವರನಯ್ಯಾ, ಕೂಡಲಚೆನ್ನಸಂಗಯ್ಯಾ.