Index   ವಚನ - 1306    Search  
 
ದಶ ದ್ವಾದಶಂಗಳ ಮೇಲಣ ಬಾಗಿಲಲಿರ್ದು, ಕಾಲ ಜರಾ ಮರಣವೆಂಬ ಬಾಗಿಲ ಹೊಗದೆ, ಹೊನ್ನಬಣ್ಣವಾಗದಂತೆ ಮಾಡಿಕೊಂಬುದು. ಕುಲಸಂಕುಲವಾಗದೆ ದಶದಿಕ್ಕಿನಲ್ಲಿ ದೇಸಿಗನಾಗದೆ ದೇಶಿಕನಾಗಿರಬೇಕು. ದಶಸ್ಥಾನಂಗಳ ನೋಡಿ ಲಿಂಗಸ್ಥಾನದಲ್ಲಿ ನಿಂದು, ಇಂತು ದಶಸಂಪಾದನೆ ಮೂವತ್ತಾರರಿಂದ, ಸಂಸಾರಮೃಗದ ಮರೀಚಿಕಾಜಲದ ಮಾಯವೆಂದರಿತು, ನಿಶ್ಚಲ ಮತಿಯಿಂದ ಶುದ್ಧಾತ್ಮಚಿತ್ತರಾಗಿ ಆರಾಧಿಸಬೇಕು ಕೂಡಲಚೆನ್ನಸಂಗನ ಶರಣರು.