Index   ವಚನ - 1314    Search  
 
ದೇವರು ಬಿದ್ದರು ದೇವರು ಬಿದ್ದರು ಎಂದು ಸಾಹಿತ್ಯದ ಕೂಡ ಸಾಯಬೇಕೆಂಬಿರಿ. ಆವಾಗ ಬಿದ್ದಿತ್ತೆಂದರಿಯಿರಿ ಆವಾಗ ಇದ್ದಿತ್ತೆಂದರಿಯಿರಿ, ಆವಾಗ ಇದ್ದಿತ್ತು ಆವಾಗ ಬಿದ್ದಿತ್ತು ಎಂದು ಬಲ್ಲರೆ ನೀವು ಹೇಳಿರೆ? "ಅದೃಶ್ಯಭಾವನಾ ನಾಸ್ತಿ ದೃಶ್ಯಮೇವ ವಿನಶ್ಯತಿ| ಅವರ್ಣಮಕ್ಷರಂ ಬ್ರಹ್ಮ ಕಥಂ ಧ್ಯಾಯಂತಿ ಯೋಗಿನಃ"|| ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯನ ಅರಿದಾಗಲಿದ್ದಿತ್ತು ಮರೆದಾಗ ಬಿದ್ದಿತ್ತು.