Index   ವಚನ - 1321    Search  
 
ನಡೆಯುಳ್ಳವರ ನುಡಿಯೆಲ್ಲ ಬರಡು ಹಯನಾದಂತೆ, ನಡೆಯಿಲ್ಲದವರ ನುಡಿಯೆಲ್ಲ ಹಯನು ಬರಡಾದಂತೆ. ಅವರು ಗಡಣಿಸಿ ನುಡಿವ ವಚನ ಎನ್ನ ಶ್ರೋತ್ರಕ್ಕೆ ಸೊಗಸದಯ್ಯ. ಅವರ ನೋಡುವರೆ ಎನ್ನ ಕಣ್ಣು ಮನದಿಚ್ಛೆಯಾಗದಯ್ಯ. ಮಂಡೆ ಬೋಳಿಸಿ ಕುಂಡೆ ಬೆಳಸಿ ಹೆಗ್ಗುಂಡ ಮೈಯೊಳಗೆ ತಳೆದಿರೆ ಕಂಡು ಕಂಡು ವಂದಿಸುವರೆ ಎನ್ನ ಮನ ನಾಚಿತ್ತು ನಾಚಿತ್ತಯ್ಯ. ಜಡೆಯ ತೋರಿ ಮುಡಿಯ ತೋರಿ ಅಡಿಗಡಿಗೊಮ್ಮೆ ಎಡೆ ಮಾಡಿದರೆ ಇಲ್ಲವೆನ್ನೆ ಕಡುಕೋಪವ ತಾಳುವೆ. ಮಡೆಯಳ ಹೊಲೆಯರ ಗುರುವಾದರು ಲಿಂಗವೆನ್ನೆ. ಜಂಗಮವಾದರು ಜಂಗಮವೆನ್ನೆ ಎನ್ನ ಮನದೊಡೆಯ ಕೂಡಲಚೆನ್ನಸಂಗಮದೇವ.