Index   ವಚನ - 1351    Search  
 
ನೀಡಿ ನೀಡಿ ನಿಜವಿಲ್ಲದೆ ಕೆಟ್ಟೆ, ಮಾಡಿ ಮಾಡಿ ಮನವಿಲ್ಲದೆ ಕೆಟ್ಟೆನಯ್ಯಾ, ಅಟಮಟದ ಬೆಂದ ಸಂಸಾರವ ಹಿಡಿದು, ಒಡಲ ಹೊರೆವೆನೆಂದು ಭವಭಾರಿಯಾದೆನಯ್ಯಾ. ಕುಹಕವೆಂಬ ಮಡುವಿನ ಕೆಸರೊಳು ಬಿದ್ದು, ಪಶುವಿನಂತಾದೆನಯ್ಯಾ. ನನ್ನವಗುಣವ ಸಂಪಾದಿಸದಿರಯ್ಯಾ. ಎನ್ನ ಭವಪಾಶವ ಹರಿದು, ಇನ್ನಾದರೂ ಕರುಣಿಸೈ ಮಹಾದಾನಿ ಕೂಡಲಚೆನ್ನಸಂಗಮದೇವಯ್ಯಾ.