Index   ವಚನ - 1350    Search  
 
ನಿಃಸ್ವರೂಪನ ಸ್ವರೂಪಕ್ಕೆ ತಂದು ನಯನಾದಿ ಅನಿಮಿಷ ದೃಷ್ಟವಾದ ಪ್ರಸಾದಿ, ಇಷ್ಟಾನಿಷ್ಟವಾದ ಪ್ರಸಾದಿ, ಪ್ರಸಾದೇನ ಪ್ರಸಾದಿ. ಇದು ಕಾರಣ ಕೂಡಲಚೆನ್ನಸಂಗಯ್ಯಾ, ಲಿಂಗೈಕ್ಯಪ್ರಸಾದಿ.