Index   ವಚನ - 1356    Search  
 
ನೋಟವುಳ್ಳನ್ನಕ್ಕರ ಕೂಟವುಂಟು, ಭಾವವುಳ್ಳನ್ನಕ್ಕರ ಭ್ರಮೆಯುಂಟು. ನೋಟಗೆಟ್ಟು ಭಾವನಷ್ಟವಾಗಿ ಮನ ಲಯವಾದ ಬಳಿಕ ಕೂಡಲಚೆನ್ನಸಂಗಮದೇವಾ, ನಿಮ್ಮ ಶರಣ ಒಳಗೂ ನೋಡ, ಹೊರಗೂ ನೋಡ.