Index   ವಚನ - 1370    Search  
 
ಪರಪಾಕವರ್ಜಿತ ಸ್ವಯಪಾಕವೆಂದು ತಮ್ಮ ತನುವಿನ ಹವಣಿಗೆ ಗಡಣಿಸಿಕೊಂಬರು. ತನು ಮನ ಮುಟ್ಟಿ ಓಗರ ಲಿಂಗಾರ್ಪಿತಕ್ಕೆ ಸಲ್ಲದು. ಅನರ್ಪಿತವನುಂಡು ನಾವು ಅಚ್ಚ ಪ್ರಸಾದಿಗಳು ನಿಚ್ಚ ಪ್ರಸಾದಿಗಳೆಂದರೆ ನಮ್ಮ ಲಿಂಗೈಕ್ಯ ಶರಣರು ಮೆಚ್ಚರು. ಬಂದ ಪದಾರ್ಥವ ಕೂಡಲಚೆನ್ನಸಂಗಮದೇವರಿಗರ್ಪಿಸಿ ಕೊಳಬಲ್ಲರೆ ಆತನೇ ಪ್ರಸಾದಿ.