Index   ವಚನ - 1369    Search  
 
ಪರಧನ ಪರಸತಿ ಪರವಾರ್ತೆಯ ತೊರೆಯದನ್ನಕ್ಕ ಎಂತು ಮಾಹೇಶ್ವರನಪ್ಪನಯ್ಯಾ? ಲಿಂಗಪೂಜೆಯಲ್ಲಿ ಲೀಯವಾಗಿ ಅಂಗಗುಣವಿರೋಧಿಯಾಗದನ್ನಕ್ಕ ಎಂತು ಮಾಹೇಶ್ವರನಪ್ಪನಯ್ಯಾ? ಗುರುಪ್ರಸಾದದಲ್ಲಿ ನಿಹಿತಾವಧಾನಿಯಾಗದನ್ನಕ್ಕ ಎಂತು ಮಾಹೇಶ್ವರನಪ್ಪನಯ್ಯಾ? ಕೂಡಲಚೆನ್ನಸಂಗಯ್ಯನಲ್ಲಿ, ಮಾಹೇಶ್ವರನೆನಿಸಿಕೊಂಬುದು ಸಾಮಾನ್ಯವೆ ಅಯ್ಯಾ.