Index   ವಚನ - 1377    Search  
 
ಪರಿಪೂರ್ಣವನೈದಿಪ್ಪನಾಗಿ ಜ್ಞಾನಿಯಲ್ಲ ಅಜ್ಞಾನಿಯಲ್ಲ; ಶೂನ್ಯನಲ್ಲ, ನಿಶ್ಯೂನ್ಯನಲ್ಲ, ಉಭಯಾಚಾರ ತಾನೆಯಾಗಿ ಕೊಳುಕೊಡೆಯಿಲ್ಲ. ಸಾಕಾರದ ಸಂಬಂಧವನರಿಯ, ನಿತ್ಯಮುಕ್ತ ನಿರವಯ, ಉಭಯಾತ್ಮಕ ತಾನೆ ಕೂಡಲಚೆನ್ನಸಂಗಯ್ಯನೆಂದೆನ್ನ ಸುಯಿದಾನಿಯಯ್ಯಾ ಬಸವಣ್ಣನು.