Index   ವಚನ - 1376    Search  
 
ಪರಶಿವನು ಪರಮಪುರುಷನಾಗಿಪ್ಪನು ನೋಡಾ. ಈ ಪುರುಷಪದವು ಶಿವಂಗಲ್ಲದೆ ಮಿಕ್ಕ ದೈವಂಗಳಿಗಿಲ್ಲ ನೋಡಾ. ಆ ಪರಶಿವನು ಗುರುಲಿಂಗಜಂಗಮವೆಂಬ ಮೂರು ಪಾದಂಗಳಿಂದುತ್ಕೃಷ್ಟವಾಗಿ ಉದಯಿಸಿ ಜಗದುದ್ಧಾರಂಗೆಯ್ಯುತಿಪ್ಪನು ನೋಡಾ, 'ತ್ರಿಪಾದೂರ್ಧ್ವಂ ಉದೈತ್ಪುರುಷಃ' ಎಂದುದಾಗಿ ಇಂತಪ್ಪ ಗುರುಲಿಂಗಜಂಗಮದ ಪಾದೋದಕ ಪ್ರಸಾದವ ಪಡೆಯಲರಿಯದೆ ಇಳೆಯ ಮೇಲಿನ ಹಲವು ಜಲಂಗಳಿಗೆ ಹರಿದು, ಬಳಲಿ ಬಾಯಾರಿ ನರರೆಲ್ಲರು ತೊಳಲುತಿಪ್ಪರು ನೋಡಾ. ಕೂಡಲಚೆನ್ನಸಂಗಮದೇವಾ. ಇಂತಿದರ ಭೇದವನರಿದು ನಮ್ಮ ಶರಣರು ತ್ರಿವಿಧ ಪಾದೋದಕ ಪ್ರಸಾದವ ಸವಿದು ಚಿರಸುಖಿಯಾಗಿಪ್ಪರು.