Index   ವಚನ - 1384    Search  
 
ಪುಣ್ಯತೀರ್ಥಕ್ಷೇತ್ರಂಗಳಲ್ಲಿ ತಂದ ಶಿಲೆಯ ಪರೀಕ್ಷಿಸಿ ಸಂಸ್ಕಾರಂಗೈಯಲು ಅದು ಲಿಂಗವಾಗಿಪ್ಪುದಯ್ಯಾ. ಸದ್ವಂಶೀಯರಾದ ವಟುಗಳ ಪರೀಕ್ಷಿಸಿ ಸಂಸ್ಕಾರಂಗೈಯಲು ಗುರುಜಂಗಮವಾಗಿರ್ಪರಯ್ಯಾ, ಇಂತಿಹುದನಾರಯ್ಯದೆ ಸಂಸ್ಕಾರವಿರಹಿತ ಗುರುಲಿಂಗಜಂಗಮವ ಪೂಜಿಸುವ ಅರೆಮರುಳರನೆನಗೊಮ್ಮೆ ತೋರದಿರಯ್ಯಾ, ಕೂಡಲಚೆನ್ನಸಂಗಮದೇವಾ.