Index   ವಚನ - 1383    Search  
 
ಪಾಲುಂಡ ಸವಿಯ ಮೇಲು ಪಂಕ್ತಿಯ ಹೇಳಬಹುದಲ್ಲದೆ, ಸುಖದ ಸೋಂಕಿನ ಸ್ವಾನುಭಾವವ ಹೇಳಬಾರದು ಕೇಳಬಾರದು. ಇಂಬಿನ ಸೋಂಕು ಸಂಬಂಧವರಿದ ಬಳಿಕ ಉಪಚಾರವುಂಟೆ? ಕೂಡಲಚೆನ್ನಸಂಗಯ್ಯನರುಹಿದಡರಿವೆನಲ್ಲದೆ ಎನಗೆ ಬೇರೆ ಸ್ವತಂತ್ರಜ್ಞಾನವಿಲ್ಲ.