ಪ್ರಣಮ: ಪ್ರಾಣವಾಯುವಿನ
ನೆಲೆಯನರಿದು ಬಿಡಬಲ್ಲರೆ,
ಪ್ರಣಮ: ಓಂಕಾರದ ಶ್ರುತಿಯ
ಮೂಲಾಂಕುರವನರಿಯಬಲ್ಲರೆ,
ಪ್ರಣಮ: ಐವತ್ತೆರಡಕ್ಷರದ ಲಿಪಿಯ
ತಿಳಿದುನೋಡಿ ಓದಬಲ್ಲರೆ,
ಪ್ರಣಮ: ನಾದಬಿಂದು ಕಲಾತೀತನಾಗಬಲ್ಲರೆ-
ಇದು ಕಾರಣ, ಕೂಡಲಚೆನ್ನಸಂಗಾ,
ನಿಮ್ಮ ಶರಣರು ಸಹಸ್ರವೇದಿಗಳಾದ ಕಾರಣ
ಪ್ರಣಮಪ್ರತಿಷ್ಠಾಚಾರ್ಯರು.
ಅವರಿಗೆ ಮಿಗೆ ಮಿಗೆ ನಮೋ ನಮೋ ಎಂಬೆನು.
Art
Manuscript
Music
Courtesy:
Transliteration
Praṇama: Prāṇavāyuvina
neleyanaridu biḍaballare,
praṇama: Ōṅkārada śrutiya
mūlāṅkuravanariyaballare,
praṇama: Aivatteraḍakṣarada lipiya
tiḷidunōḍi ōdaballare,
praṇama: Nādabindu kalātītanāgaballare-
idu kāraṇa, kūḍalacennasaṅgā,
nim'ma śaraṇaru sahasravēdigaḷāda kāraṇa
praṇamapratiṣṭhācāryaru.
Avarige mige mige namō namō embenu.