ಪ್ರಮಥದಲ್ಲಿ ಪಾದೋದಕ,
ದ್ವಿತೀಯದಲ್ಲಿ ಲಿಂಗೋದಕ,
ತೃತೀಯದಲ್ಲಿ ಮಜ್ಜನೋದಕ,
ಚತುರ್ಥದಲ್ಲಿ ಸ್ಪರ್ಶನೋದಕ,
ಪಂಚಮದಲ್ಲಿ ಅವಧಾನೋದಕ,
ಷಷ್ಠದಲ್ಲಿ ಆಪ್ಯಾಯನೋದಕ,
ಸಪ್ತಮದಲ್ಲಿ ಹಸ್ತೋದಕ,
ಅಷ್ಟಮದಲ್ಲಿ ಪರಿಣಾಮೋದಕ,
ನವಮದಲ್ಲಿ ನಿರ್ನಾಮೋದಕ,
ದಶಮದಲ್ಲಿ ಸತ್ಯೋದಕ,-
ಇಂತೀ ದಶವಿಧಪಾದೋದಕವ ತಿಳಿದುಕೊಳಬಲ್ಲ
ಕೂಡಲಚೆನ್ನಸಂಗಾ ನಿಮ್ಮ ಶರಣ.
Art
Manuscript
Music
Courtesy:
Transliteration
Pramathadalli pādōdaka,
dvitīyadalli liṅgōdaka,
tr̥tīyadalli majjanōdaka,
caturthadalli sparśanōdaka,
pan̄camadalli avadhānōdaka,
ṣaṣṭhadalli āpyāyanōdaka,
saptamadalli hastōdaka,
aṣṭamadalli pariṇāmōdaka,
navamadalli nirnāmōdaka,
daśamadalli satyōdaka,-
intī daśavidhapādōdakava tiḷidukoḷaballa
kūḍalacennasaṅgā nim'ma śaraṇa.