Index   ವಚನ - 1402    Search  
 
ಪ್ರಸಾದ ಪ್ರಸಾದವೆಂದು ಹೆಸರಿಟ್ಟು ಕೊಂಬಿರಣ್ಣಾ. ಮುಂದೆ ನೋಡಿದಡೆ ಪ್ರಸಾದವಾಯಿತ್ತು. ಹಿಂದೆ ನೋಡಿದರೆ ಮಲಮೂತ್ರವಾಯಿತ್ತು,, ಪ್ರಸಾದಕ್ಕೆ ಭಂಗ ಬಂದಿತ್ತು ನೋಡಾ! ಇಂತಪ್ಪ ಪ್ರಸಾದಿಗಳ ನಮ್ಮ ಕೂಡಲಚೆನ್ನಸಂಗ ಮೆಚ್ಚ.