ಪ್ರಸಾದ ಪ್ರಸಾದವೆಂದು ಹೆಸರಿಟ್ಟುಕೊಂಡು
ಮಾತನಾಡುವುದು ನೀವೆಲ್ಲ ಕೇಳಿರೇ,
ಗುರುಮುಖದಲರ್ಪಿತ ಮಾಡಲರಿಯರು,
ಲಿಂಗಮುಖದಲರ್ಪಿತ ಮಾಡಲರಿಯರು,
ತಾವೇ ಗುರುವೆಂದು ಪ್ರಸಾದವನಿಕ್ಕುವರಯ್ಯಾ,
ತಾವೇ ಲಿಂಗವೆಂದು ಪ್ರಸಾದವನಿಕ್ಕುವರಯ್ಯಾ,
ಜಂಗಮಮುಖದಲರ್ಪಿತವ ಮಾಡಲರಿಯರು,
ತಾವೇ ಜಂಗಮವೆಂದು ಪ್ರಸಾದವನಿಕ್ಕುವರಯ್ಯಾ,
ಸರ್ವಮುಖದಲಿ ಲಿಂಗಾರ್ಪಿತ ಮಾಡಲರಿಯರು,
ತಾವೇ ಸರ್ವಮುಖಲಿಂಗವೆಂದು ಪ್ರಸಾದವನಿಕ್ಕುವರಯ್ಯಾ,
.................... ಲೋಗರಿಗಿಕ್ಕುವ
ಭಂಡರನೇನೆಂಬೆನಯ್ಯಾ?
Art
Manuscript
Music
Courtesy:
Transliteration
Prasāda prasādavendu hesariṭṭukoṇḍu
mātanāḍuvudu nīvella kēḷirē,
gurumukhadalarpita māḍalariyaru,
liṅgamukhadalarpita māḍalariyaru,
tāvē guruvendu prasādavanikkuvarayyā,
tāvē liṅgavendu prasādavanikkuvarayyā,
jaṅgamamukhadalarpitava māḍalariyaru,
tāvē jaṅgamavendu prasādavanikkuvarayyā,
sarvamukhadali liṅgārpita māḍalariyaru,
tāvē sarvamukhaliṅgavendu prasādavanikkuvarayyā,
.................... Lōgarigikkuva
bhaṇḍaranēnembenayyā?