Index   ವಚನ - 1405    Search  
 
ಪ್ರಸಾದಲಿಂಗಮೋಹಿತನಾದಡೆ ಅಂಗರುಚಿಗೆ ಇಚ್ಛೈಸಲಾಗದು. ಪ್ರಸಾದಲಿಂಗಭಕ್ತನಾದಡೆ ಪೂರ್ವಾಹಾರವ ಕೈಕೊಳ್ಳಲಾಗದು. ಪ್ರಸಾದಲಿಂಗಪೂಜಕನಾದಡೆ ಅಪ್ರಸಾದಿಗೆ ಉಣಲಿಕ್ಕಲಾಗದು. ಪ್ರಸಾದಲಿಂಗವೀರನಾದಡೆ ಅನ್ಯರಿಗೆ ಕೈಯಾನಲಾಗದು. ಪ್ರಸಾದಲಿಂಗಪ್ರಸಾದಿಯಾದಡೆ ಜೀವಹಿಂಸೆಯ ಮಾಡಲಾಗದು. ಪ್ರಸಾದಲಿಂಗಪ್ರಾಣಿಯಾದಡೆ ಆತ್ಮನಿಗ್ರಹವ ಮಾಡಲಾಗದು. ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ ಈ ಆರು ಸಹಿತ ಪ್ರಸಾದಲಿಂಗಭಕ್ತಿ.