Index   ವಚನ - 1420    Search  
 
ಬರಿಯ ಬೋಳುಗಳೆಲ್ಲಾ ಜಂಗಮವೆ? ಜಡಜೀವಿಗಳೆಲ್ಲಾ ಜಂಗಮವೆ? ವೇಷಧಾರಿಗಳೆಲ್ಲ ಜಂಗಮವೆ? ಇನ್ನಾವುದು ಜಂಗಮವೆಂದಡೆ: ನಿಸ್ಸೀಮನೆ ಜಂಗಮ, ನಿಜೈಕ್ಯನೆ ಜಂಗಮ. ಇಂಥ ಜಂಗಮದ ಸುಳುಹ ಕಾಣದೆ ಕೂಡಲಚೆನ್ನಸಂಗಮದೇವ ತಾನೆ ಜಂಗಮವಾದ.