Up
ಶಿವಶರಣರ ವಚನ ಸಂಪುಟ
  
ಚನ್ನಬಸವಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 1424 
Search
 
ಬಸವಣ್ಣನುದ್ಧರಿಸಿದ ಭಕ್ತಿವಿಡಿದು, ಅಂಗದ ಮೇಲೆ ಲಿಂಗವ ಧರಿಸಿ ಗುರುಲಿಂಗಜಂಗಮವನಾರಾಧಿಸಿ, ಅವರೊಕ್ಕುದ ಕೊಂಡು ಮುಕ್ತರಾಗಲರಿಯದೆ, ಬೇರೆ ಇದಿರಿಟ್ಟು ನಂದಿ ವೀರಭದ್ರ ಮತ್ತೆ ಕೆಲವು ಲಿಂಗಂಗಳೆಂದು ಪೂಜಿಸುವ ಲಿಂಗದ್ರೋಹಿಯ ಮುಖವ ನೋಡಲಾಗದು. ಅದೇನು ಕಾರಣವೆಂದಡೆ: ಗಂಡನುಳ್ಳ ಸತಿ ಅನ್ಯಪುರುಷನನಪ್ಪುವಲ್ಲಿ ಪಾಣ್ಬರಪ್ಪರಲ್ಲದೆ ಸತ್ಯರಪ್ಪರೆ? ಅದು ಕಾರಣ - ಲಿಂಗವಂತನ ಕೈಯಲ್ಲಿ ಪೂಜಿಸಿಕೊಂಬ ಅನ್ಯಲಿಂಗಂಗಳೆಲ್ಲವು ಹಾದರಕ್ಕೆ ಹೊಕ್ಕ ಹೊಲೆಗೆಟ್ಟವಪ್ಪುವಲ್ಲದೆ ಅವು ಲಿಂಗಂಗಳಲ್ಲ. ತನ್ನ ಲಿಂಗದಲ್ಲಿ ಅವಿಶ್ವಾಸವ ಮಾಡಿ ಅನ್ಯಲಿಂಗಂಗಳ ಭಜಿಸುವಲ್ಲಿ ಆ ಲಿಂಗವಂತ ಕೆರ್ಪ ಕಚ್ಚಿದ ಶ್ವಾನನಪ್ಪನಲ್ಲದೆ ಭಕ್ತನಲ್ಲ. ಅದೆಂತೆಂದಡೆ: "ಲಿಂಗದೇಹೀ ಶಿವಾತ್ಮಾಚ ಸ್ವಗೃಹೇಂ ಪ್ರತಿಪೂಜನಾತ್| ಉಭಯೋ ಪಾಪಸಂಬಂಧಃ ಶ್ವಾನಶ್ವಪಚಪಾದುಕೈಃ"|| ಎಂದುದಾಗಿ ಇದುಕಾರಣ, ಈ ಉಭಯವನು ಕೂಡಲಚೆನ್ನಸಂಗಯ್ಯ ಛಿದ್ರಿಸಿ ಚಿನಿಖಂಡವನಾಯ್ದು ದಿಗ್ಬಲಿ ಕೊಟ್ಟು ಅಘೋರ ನರಕದಲ್ಲಿಕ್ಕುವನು.
Art
Manuscript
Music
Your browser does not support the audio tag.
Courtesy:
Video
Transliteration
Basavaṇṇanud'dharisida bhaktiviḍidu, aṅgada mēle liṅgava dharisi guruliṅgajaṅgamavanārādhisi, avarokkuda koṇḍu muktarāgalariyade, bēre idiriṭṭu nandi vīrabhadra matte kelavu liṅgaṅgaḷendu pūjisuva liṅgadrōhiya mukhava nōḍalāgadu. Adēnu kāraṇavendaḍe: Gaṇḍanuḷḷa sati an'yapuruṣananappuvalli pāṇbarapparallade satyarappare? Adu kāraṇa - liṅgavantana kaiyalli Pūjisikomba an'yaliṅgaṅgaḷellavu hādarakke hokka holegeṭṭavappuvallade avu liṅgaṅgaḷalla. Tanna liṅgadalli aviśvāsava māḍi an'yaliṅgaṅgaḷa bhajisuvalli ā liṅgavanta kerpa kaccida śvānanappanallade bhaktanalla. Adentendaḍe: Liṅgadēhī śivātmāca svagr̥hēṁ pratipūjanāt| ubhayō pāpasambandhaḥ śvānaśvapacapādukaiḥ|| endudāgi idukāraṇa, ī ubhayavanu kūḍalacennasaṅgayya chidrisi cinikhaṇḍavanāydu digbali koṭṭu aghōra narakadallikkuvanu.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Comment
None
ವಚನಕಾರ ಮಾಹಿತಿ
×
ಚನ್ನಬಸವಣ್ಣ
ಅಂಕಿತನಾಮ:
ಕೂಡಲಚೆನ್ನಸಂಗಮದೇವ
ವಚನಗಳು:
1762
ಕಾಲ:
12ನೆಯ ಶತಮಾನ
ಕಾಯಕ:
ಅನುಭಾವಿಗಳು ಬರೆದ ವಚನಗಳ ಪರಾಮರ್ಶೆ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಕಪ್ಪಡಿ ಸಂಗಮ, ಹುನುಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ್ ಜಿಲ್ಲೆ.- ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ತಂದೆ:
ಶಿವದೇವ (ಶಿವಸ್ವಾಮಿ)
ತಾಯಿ:
ನಾಗಲಾಂಬಿಕೆ(ಅಕ್ಕನಾಗಮ್ಮ)
ಐಕ್ಯ ಸ್ಥಳ:
ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: