Index   ವಚನ - 1428    Search  
 
ಬಾಗಿಲ ಕಾಯ್ದಿರ್ದ ಗೊಲ್ಲಂಗೆ ವೆಚ್ಚಕ್ಕೆ ಒಡೆತನವುಂಟೆ ಅಯ್ಯಾ? ಸೂತ್ರದ ಬೊಂಬೆಗೆ ಪ್ರಾಣವುಂಟೆ, ಆಡಿಸುವ ಜಾತಿ ಉತ್ತಮಂಗಲ್ಲದೆ? ಎನ್ನ ಭಾವಕ್ಕೆ ಮನೋಮೂರ್ತಿಯಾಗಿ, ಕೂಡಲಚೆನ್ನಸಂಗಮದೇವರಲ್ಲಿ ಪ್ರಭುದೇವರ ಸುಳುಹು ಅಗಮ್ಯವಾಗಿತ್ತು.