ಬಾಯಿಗೆ ಬಂದಂತೆ ಬಗುಳಾ[ಡಿ],
ಹಸಿದಾಗ ಲಿಂಗಕ್ಕೆ ಸಿತಾಳಪತ್ರೆಯಂ ಕೊಟ್ಟು,
ವಿಭೂತಿಯನಿಟ್ಟು, ರುದ್ರಾಕ್ಷಿಯ ತೊಟ್ಟು,
ಕಂಥೆ ಬೊಂತೆಯ ಧರಿಸಿ, ಪರನಿಂದೆಯಂ ಮಾಡಿ,
ರುದ್ರನ ಮನೆಯ ಛತ್ರದಲುಂಡುಂಡು ಕೆಡೆವಾತನು
ವೇಶಿಯ ಪುತ್ರ ಕಾಣಾ,
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Bāyige bandante baguḷā[ḍi],
hasidāga liṅgakke sitāḷapatreyaṁ koṭṭu,
vibhūtiyaniṭṭu, rudrākṣiya toṭṭu,
kanthe bonteya dharisi, paranindeyaṁ māḍi,
rudrana maneya chatradaluṇḍuṇḍu keḍevātanu
vēśiya putra kāṇā,
kūḍalacennasaṅgamadēvā.