Index   ವಚನ - 1431    Search  
 
ಬೆನ್ನಲ್ಲಿ ಬಸವಣ್ಣನ ತೆಗೆದ, ಹೊಟ್ಟೆಯಲ್ಲಿ ಎನ್ನ ತೆಗೆದ, ಬ್ರಹ್ಮರಂಧ್ರದಲ್ಲಿ ಅಲ್ಲಮನ ತೆಗೆದ, ಸಂಗನೆ ಮಡಿವಾಳನೊ, ಮಡಿವಾಳನೆ ಸಂಗನೊ, ಎಂದು ನುಡೆಯಲಮ್ಮೆನು. ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ ಮಡಿವಾಳಸಾಹಿತ್ಯ ನಮ್ಮ ಬಸವಣ್ಣಂಗೆ.