Index   ವಚನ - 1430    Search  
 
ಬೀಜದಿಂದಾಯಿತ್ತು ಅಂಕುರವೆಂದೆಂಬರು, ಆ ಬೀಜಕ್ಕೆ ಅಂಕುರವೆ ಪ್ರಾಣವೆಂದರಿಯರು. ಲಿಂಗದಿಂದಾಯಿತ್ತು ಜಂಗಮವೆಂದೆಂಬರು ಆ ಲಿಂಗಕ್ಕೆ ಜಂಗಮವೆ ಪ್ರಾಣವೆಂದರಿಯರು, ಕಾಣಾ ಕೂಡಲಚೆನ್ನಸಂಗಮದೇವಾ.