ಬ್ರಹ್ಮಾಬ್ರಹ್ಮರಿಲ್ಲದಂದು,
ವಿಷ್ಣು ಮಾಯಾಜಾಲವಿಲ್ಲದಂದು,
ಸೃಷ್ಟ್ಯಸೃಷ್ಟಿಯಿಲ್ಲದಂದು,
ಕಾಳಿಂಗ ಕರೆಕಂಠರಿಲ್ಲದಂದು,
ಉಮೆಯ ಕಲ್ಯಾಣವಿಲ್ಲದಂದು,
ದ್ವಾದಶಾದಿತ್ಯರಿಲ್ಲದಂದು,
ನಂದಿಕೇಶ್ವರನಿಲ್ಲದಂದು,
ಲಿಂಗಸ್ಥಲ ಜಂಗಮಸ್ಥಲ ಪ್ರಸಾದಿಸ್ಥಲವಿಲ್ಲದಂದು,
ದೇಹಾಹಂಕಾರ ಪ್ರಕೃತಿಯಿಲ್ಲದಂದು,
ಕೂಡಲಚೆನ್ನಸಂಗಯ್ಯ ತಾನೆನ್ನದಿರ್ದನಂದು.
Art
Manuscript
Music
Courtesy:
Transliteration
Brahmābrahmarilladandu,
viṣṇu māyājālavilladandu,
sr̥ṣṭyasr̥ṣṭiyilladandu,
kāḷiṅga karekaṇṭharilladandu,
umeya kalyāṇavilladandu,
dvādaśādityarilladandu,
nandikēśvaranilladandu,
liṅgasthala jaṅgamasthala prasādisthalavilladandu,
dēhāhaṅkāra prakr̥tiyilladandu,
kūḍalacennasaṅgayya tānennadirdanandu.