Index   ವಚನ - 1448    Search  
 
ಭಕ್ತನಾಗಬಹುದು, ಮಾಹೇಶ್ವರನಾಗಬಾರದು. ಮಾಹೇಶ್ವರನಾಗಬಹುದು, ಪ್ರಸಾದಿಯಾಗಬಾರದು. ಪ್ರಸಾದಿಯಾಗಬಹುದು, ಪ್ರಾಣಲಿಂಗಿಯಾಗಬಾರದು. ಪ್ರಾಣಲಿಂಗಿಯಾಗಬಹುದು, ಶರಣನಾಗಬಾರದು. ಶರಣನಾಗಬಹುದು, ಬಯಲನೆಯ್ದಬಾರದು. ಕೂಡಲಚೆನ್ನಸಂಗಮದೇವಾ.