ಭಕ್ತನೆದ್ದು ಭವಿಯ ಮುಖವ ಕಂಡರೆ,
ರೌರವ ನರಕವೆಂಬರು.
ಭಕ್ತನಾವನು? ಭವಿಯಾವನು?
ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ.
ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ,
ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ,
ಮದ ಐದನೆಯ ಭವಿ, ಮತ್ಸರ ಆರನೆಯ ಭವಿ.
ಇಂತೀ ಷಡ್ವಿಧ ಭವಿಯ ತಮ್ಮೆದೆಯೊಳಗೆ ಇಂಬಿಟ್ಟುಕೊಂಡು,
'ನಾನು ಭವಿಯ ಮೋರೆಯ ಕಾಣಬಾರದು' ಎಂದು
ಮುಖದ ಮೇಲೆ ವಸ್ತ್ರವ ಬಾಸಣಿಸಿಕೊಂಡು ತಿರುಗುವ
ಕುನ್ನಿಗಳ ಮೆಚ್ಚುವನೆ ಕೂಡಲಚೆನ್ನಸಂಗಮದೇವ.
Art
Manuscript
Music
Courtesy:
Transliteration
Bhaktaneddu bhaviya mukhava kaṇḍare,
raurava narakavembaru.
Bhaktanāvanu? Bhaviyāvanu?
Ballare hēḷi, ariyadiddare kēḷi.
Kāma ondaneya bhavi, krōdha eraḍaneya bhavi,
lōbha mūraneya bhavi, mōha nālkaneya bhavi,
mada aidaneya bhavi, matsara āraneya bhavi.
Intī ṣaḍvidha bhaviya tam'medeyoḷage imbiṭṭukoṇḍu,
'nānu bhaviya mōreya kāṇabāradu' endu
mukhada mēle vastrava bāsaṇisikoṇḍu tiruguva
kunnigaḷa meccuvane kūḍalacennasaṅgamadēva.