Index   ವಚನ - 1481    Search  
 
ಭಿನ್ನದೈವವುಳ್ಳ ಭಕ್ತನ ಮನೆಯ ಆರೋಗಣೆ ಅನ್ಯಾಹಾರವಯ್ಯಾ. ನಂಬಿಗೆಯಿಲ್ಲದ ಭಕ್ತನ ಮನೆಯ ಆರೋಗಣೆ ಸಂದೇಹದ ಕೂಳು. ಕೊಟ್ಟು ಕೊಂಡು ನೀಡಿ ಮಾಡಿ, ಹಮ್ಮು ನುಡಿವ ಭಕ್ತನ ಮನೆಯ ಆರೋಗಣೆ ಕಾರಿದ ಕೂಳು. ನಿಮ್ಮ ನಂಬಿದ ಸದ್ಭಕ್ತರ ಮನೆಯ ಆರೋಗಣೆ ಲಿಂಗಾರ್ಪಿತವಯ್ಯಾ. ಅದೆಂತೆಂದಡೆ: ಸದಾಚಾರ ಶಿವಾಚಾರ ಲಿಂಗಾಚಾರ ಗಣಾಚಾರ ಭೃತ್ಯಾಚಾರ ಸತ್ಕಾಯಕದಿಂದ ಬಂದುದಾಗಿ ಭಕ್ತಿಪದಾರ್ಥವಯ್ಯಾ, ಕೂಡಲಚೆನ್ನಸಂಗಮದೇವಾ.