ಮಂತ್ರವೆ ಅವಯವಂಗಳಾಗುಳ್ಳ ಪರಶಿವಂಗೆ,
ನಾದವೆ ಕಿರೀಟ, `ಅ'ಕಾರ `ಉ'ಕಾರವೆ ಬಿಂದುವಕ್ತ್ರ,
ಪರಶಿವಸ್ವರೂಪವಾದ `ಹ್ರ'ಕಾರವೆ ದೇಹ,
`ಹ್ರೀಂ'ಕಾರವೆ ಶಕ್ತಿ, ಹಂಸದ್ವಯಾ ಶೃಂಗವೇ ಭುಜ,
`ವ'ಕಾರವೆ ಕಳಾ ಸ್ವರೂಪವಾದವನಿಯೆ ಪಾದದ್ವಯ.
ಇಂತೀ ಮಂತ್ರಮೂರ್ತಿಯಾದ ಪರಶಿವನು,
ಮಂತ್ರಾರ್ಥಿಗಳಿಗೆ ಮಂತ್ರಸಿದ್ಧಿಯ ಕೊಡುವ ದೇವ
ನಮ್ಮ ಕೂಡಲಚೆನ್ನಸಂಗಯ್ಯ, ಬೇರಿಲ್ಲ.
Art
Manuscript
Music
Courtesy:
Transliteration
Mantrave avayavaṅgaḷāguḷḷa paraśivaṅge,
nādave kirīṭa, `a'kāra `u'kārave binduvaktra,
paraśivasvarūpavāda `hra'kārave dēha,
`hrīṁ'kārave śakti, hansadvayā śr̥ṅgavē bhuja,
`va'kārave kaḷā svarūpavādavaniye pādadvaya.
Intī mantramūrtiyāda paraśivanu,
mantrārthigaḷige mantrasid'dhiya koḍuva dēva
nam'ma kūḍalacennasaṅgayya, bērilla.