Index   ವಚನ - 1498    Search  
 
ಮನವೆಂಬ ಘನದ ತಲೆಬಾಗಿಲಲ್ಲಿ ಸದಾಸನ್ನಹಿತನಾಗಿಪ್ಪೆ ಎಲೆ ಅಯ್ಯಾ. ಸಕಲ ಪದಾರ್ಥಂಗಳು ನಿಮ್ಮ ಮುಟ್ಟಿ ಬಹವಲ್ಲದೆ, ನಿಮ್ಮ ಮುಟ್ಟದೆ ಬಾರವೆಂಬ ಎನ್ನ ಮನದ ನಿಷ್ಠೆಗೆ ನೀನೆ ಒಡೆಯ ಕೂಡಲಚೆನ್ನಸಂಗಯ್ಯಾ.