Index   ವಚನ - 1501    Search  
 
ಮರಹು ಅರಿವಿನಲ್ಲಡಗಿ, ಅರಿವು ಮರಹ ನುಂಗಿ ತೆರಹಿಲ್ಲದಿರ್ದೆನೆಂಬ ಅಹಂ ಇದೇನೊ? ಬ್ರಹ್ಮವನೊಳಕೊಂಡ ಬ್ರಹ್ಮವು ತಾನಾಗಿ ಮತ್ತೆ ಬ್ರಹ್ಮದ ನುಡಿ ಇದೇನೊ? ಆದಿಶೂನ್ಯ ಮಧ್ಯಶೂನ್ಯ ಅಂತ್ಯಶೂನ್ಯ ಊರ್ಧ್ವಶೂನ್ಯದಿಂದತ್ತತ್ತ ನಿಂದ [ಘನದ]ನಿಲವ ಕಾಬರಾರೊ? ಇದು ಕಾರಣ, ಕೂಡಲಚೆನ್ನಸಂಗನ [ಸಹಜದ] ನಿಲವು ಬಯಲು ಚಿತ್ರಿಸಿದ ರೂಪ, ಬಯಲರಿಯದಂತೆ.