Index   ವಚನ - 1500    Search  
 
ಮನೆಯೊಳಗಣ ಕಿಚ್ಚು ಕಾನನವ ಸುಟ್ಟಿತ್ತು, ಕಾನನ ಬೆಂದಲ್ಲಿ ಮನೆ ಉರಿಯಹತ್ತಿತ್ತು, ಮನೆ ಬೆಂದು ಕಂಬ ಉಳಿಯಿತ್ತು. ಆ ಕಂಬದ ಮೇಲೆ ರತ್ನವಿದ್ದುದ ಕಂಡೆ. ಅದರ ಬೆಳಗು ಮೂರು ಲೋಕವ ತುಂಬಿತ್ತಲ್ಲಾ ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುದೇವರ ನಿಲವಿಂಗೆ ನಾನು ಶರಣೆನುತಿರ್ದೆನು.