Index   ವಚನ - 1514    Search  
 
ಮಹಾಲಿಂಗ ಮೋಹಿತನಾದಡೆ ಲೋಕದ ಮೋಹವ ಮರೆಯಬೇಕು. ಮಹಾಲಿಂಗ ಭಕ್ತನಾದಡೆ ಪೂರ್ವಭಕ್ತಿಯ ಮಾಡಲಾಗದು. ಮಹಾಲಿಂಗಪೂಜಕನಾದಡೆ ಅಜ್ಞಾನಿಗಳ ಕೂಡೆ ಸಂಗ-ಸಂಭಾಷಣೆಯ ಮಾಡಲಾಗದು. ಮಹಾಲಿಂಗ ವೀರನಾದಡೆ ಪ್ರಳಯಾದಿಗಳಿಗಂಜಲಾಗದು. ಮಹಾಲಿಂಗ ಪ್ರಸಾದಿಯಾದಡೆ ಸಮತೆ ನೆಲೆಗೊಳ್ಳಬೇಕು. ಮಹಾಲಿಂಗ ಪ್ರಾಣಿಯಾದಡೆ ಮನದ ಕೊನೆಯಲ್ಲಿ ಲಿಂಗದ ನೆನಹು ಹಿಂಗಲಾಗದು. ಇದು ಕಾರಣ -ಕೂಡಲಚೆನ್ನಸಂಗಯ್ಯನಲ್ಲಿ ಈ ಆರು ಸಹಿತ ಮಹಾಲಿಂಗಭಕ್ತಿ.