Index   ವಚನ - 1525    Search  
 
ಮಾಹೇಶ್ವರಂಗೆ ಅಪ್ಪುವೆ ಅಂಗ, ಆ ಅಂಗಕ್ಕೆ ಸುಬುದ್ಧಿಯೆ ಹಸ್ತ ಆ ಹಸ್ತಕ್ಕೆ ಕರ್ತೃಸಾದಾಖ್ಯ, ಆ ಸಾದಾಖ್ಯಕ್ಕೆ ಜ್ಞಾನಶಕ್ತಿ, ಆ ಶಕ್ತಿಗೆ ಗುರುಲಿಂಗ, ಆ ಲಿಂಗಕ್ಕೆ ಪ್ರತಿಷ್ಠೆಯ ಕಳೆ, ಆ ಕಳೆಗೆ ಜಿಹ್ವೇಂದ್ರಿಯವೆ ಮುಖವು, ಆ ಮುಖಕ್ಕೆ ಸುರಸದ್ರವ್ಯಂಗಳ ರೂಪು-ರುಚಿ ತೃಪ್ತಿಯನರಿದು ನೈಷ್ಠಿಕ ಭಕ್ತಿಯಿಂದರ್ಪಿಸಿ, ಸುಪ್ರಸಾದವ ಭೋಗಿಸಿ ಸುಖಿಸುತ್ತಿಹೆನು ಕೂಡಲಚೆನ್ನಸಂಗಾ ನಿಮ್ಮ ಮಾಹೇಶ್ವರ.