Index   ವಚನ - 1527    Search  
 
ಮುಂಡೆಯ ಕೈಯಲ್ಲಿ ಬಾಗಿನವ ಕೊಂಡಡೇನಯ್ಯಾ? ಗಂಡನುಳ್ಳ ಗರತಿಯರು ಮೆಚ್ಚರು. ಶೈವಗುರುವಿನ ಕೈಯಲ್ಲಿ ಲಿಂಗಸಾಹಿತ್ಯವಾದಡೇನಯ್ಯಾ? ವೀರಶೈವ ಶರಣರು ಮೆಚ್ಚರು. ಇದು ಕಾರಣ-ಕೂಡಲಚೆನ್ನಸಂಗಮದೇವಯ್ಯಾ, ಶೈವಗುರುವಿನ ಕೈಯಲ್ಲಿ ಸಾಹಿತ್ಯವಪ್ಪುದರಿಂದ ಸಾವುದೆ ಲೇಸಯ್ಯಾ.