Index   ವಚನ - 1529    Search  
 
ಮುಟ್ಟದ ಮುನ್ನ ಗುರುವುಂಟು, ಲಿಂಗವುಂಟು ಜಂಗಮವುಂಟು, ಪಾದೋದಕವುಂಟು, ಪ್ರಸಾದವುಂಟು. ಮುಟ್ಟಿದ ಬಳಿಕ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ. ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಸ್ವಯವಲ್ಲದೆ ಪರವಿಲ್ಲವೆಂಬುದು ನಿನ್ನಲ್ಲಿ ಕಾಣಬಂದಿತ್ತು ಕಾಣಾ ಪ್ರಭುವೆ.