ಮುತ್ತಿನ ಮೊತ್ತವ ಕತ್ತೆಗಲಂಕರಿಸಿದಡೇನು
ಅದಕೆ ಮುತ್ತಿನ ಬೆಲೆ ಗೊತ್ತಾಗಬಲ್ಲುದೆ?
ಬುತ್ತಿಯನೆನಿಸು ಹೊತ್ತು ನೆತ್ತಿಯಲ್ಲಿ ಹೊತ್ತಡೇನು
ತೃಪ್ತಿಯಾಗಬಲ್ಲುದೆ?
ನೈಷ್ಠೆಯಿಲ್ಲದ ಕಷ್ಟಜೀವಿಗೆ ಇಷ್ಟಲಿಂಗವ ಕಟ್ಟಿದಡೇನು
ಶ್ರೇಷ್ಠ ಶಿವಭಕ್ತನಾಗಬಲ್ಲನೆ?
ಅದು ಕಾರಣ, ಉತ್ತಮಾಧಿಕಾರಿಯನರಿದು
ಇಷ್ಟಲಿಂಗವ ಕೊಟ್ಟ ಗುರುವಿಗೆ
ಕೂಡಲಚೆನ್ನಸಂಗಯ್ಯನು
ಮೆಚ್ಚಿ ಮನ್ನಣೆಯನೀವನು.