ರಜದ ನಿಜದ ಭುಜದ ಗಜದ ಸದದ
ಇವೆಲ್ಲವನು ಕೊಂಡು ಹೋಗಿ,
ಮಡಿವಾಳನೆಂದು ಒಗೆಯ ಹಾಕಿದೆನು.
ಒಗೆಯ ಹಾಕಿದಡೆ, ಗುರುಮೂರ್ತಿಯ
ನಷ್ಟವ ಬಿಳಿದು ಮಾಡಿದನು.
ಲಿಂಗಸಾರಾಯಸ್ವರೂಪವ ಬಿಳಿದು ಮಾಡಿದನು,
ಜಂಗಮಸಾರಾಯಸ್ವರೂಪವ ಬಿಳಿದು ಮಾಡಿದನು,
ಅಗ್ನಿಯಿಲ್ಲದ ಪಾಕದ ಪದಾರ್ಥವ ಲಿಂಗವಿಲ್ಲದೆ ಅರ್ಪಿಸಿದನು;
ಜಂಗಮವಿಲ್ಲದೆ ನೀಡಿದನು, ಪ್ರಸಾದವಿಲ್ಲದೆ ಗ್ರಹಿಸಿದನು.
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ
ಬಸವಣ್ಣ, ಮಡಿವಾಳನೆಂಬ ಪ್ರಸಾದ ಎನಗಳವಟ್ಟಿತ್ತು.
Art
Manuscript
Music
Courtesy:
Transliteration
Rajada nijada bhujada gajada sadada
ivellavanu koṇḍu hōgi,
maḍivāḷanendu ogeya hākidenu.
Ogeya hākidaḍe, gurumūrtiya
naṣṭava biḷidu māḍidanu.
Liṅgasārāyasvarūpava biḷidu māḍidanu,
jaṅgamasārāyasvarūpava biḷidu māḍidanu,
agniyillada pākada padārthava liṅgavillade arpisidanu;
jaṅgamavillade nīḍidanu, prasādavillade grahisidanu.
Idu kāraṇa, kūḍalacennasaṅgayyanalli
basavaṇṇa, maḍivāḷanemba prasāda enagaḷavaṭṭittu.