Index   ವಚನ - 1548    Search  
 
ರೂಪನರ್ಪಿಸಿ ಫಲವೇನು, ರುಚಿಯನರ್ಪಿಸದನ್ನಕ್ಕ? ರುಚಿಯನರ್ಪಿಸಿ ಫಲವೇನು ಪರಿಣಾಮವನರ್ಪಿಸದನ್ನಕ್ಕ? ಪರಿಣಾಮವನರ್ಪಿಸಿ ಫಲವೇನು ತನ್ನನರ್ಪಿಸದನ್ನಕ್ಕ? ತನ್ನನರ್ಪಿಸಿ ಫಲವೇನು, ಕೂಡಲಚೆನ್ನಸಂಗಯ್ಯನೆಂಬ ಭಾವ ಬರಿದಾಗದನ್ನಕ್ಕ.