Index   ವಚನ - 1549    Search  
 
ರೂಪವೆಂತೆಂಬೆನಯ್ಯಾ ರೂಪಿಸಲಿಲ್ಲವಾಗಿ? ಭಾವವೆಂತೆಂಬೆನಯ್ಯಾ ಭಾವಿಸಲಿಲ್ಲವಾಗಿ? ಜ್ಞಾನವೆಂತೆಂಬೆನಯ್ಯಾ ಉಪಮಿಸಲಿಲ್ಲವಾಗಿ? ಸಹಜಲಿಂಗದ ಬೆಳಗನಂಗವಿಸುವ ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುವಿನ ನಿಲವು ವಿಪರೀತ.