Index   ವಚನ - 1551    Search  
 
ರೂಪಿಲ್ಲದ ರೂಪು, ನಿರ್ಣಯವಿಲ್ಲದ ನಿಷ್ಪತ್ತಿ, ಸೀಮೆಯ ಮೀರಿದ ನಿಸ್ಸೀಮ, ಗಮನವಿಲ್ಲದ ಗಮ್ಯ, ನುಡಿಯುಡಿಗಿದ ನಿಃಶಬ್ದ, ಪರವನರಿಯದ ಪರಿಣಾಮಿ ಕೂಡಲಚೆನ್ನಸಂಗನ ಶರಣ ಪ್ರಭುದೇವರಿಗೆ ನಮೋ ನಮೋ ಎನುತಿರ್ದೆನು.