Index   ವಚನ - 1552    Search  
 
ರೂಪು ಎಂದಡೆ ರುಚಿಯಾಯಿತ್ತು, ರುಚಿ ಎಂದಡೆ ಸವಿಯಾಯಿತ್ತು, ಸವಿ ಎಂದಡೆ ಸಂದಾಯಿತ್ತು. ರೂಪೆನ್ನದೆ ರುಚಿಯೆನ್ನದೆ ಸವಿಯೆನ್ನದೆ ಸಂದೆನ್ನದೆ ಇದ್ದ ಪ್ರಸಾದಿಗೆ ನಮೋ ನಮೋ ಎಂಬೆ ಕೂಡಲಚೆನ್ನಸಂಗಮದೇವಾ.