Index   ವಚನ - 1586    Search  
 
ಲಿಂಗವೆ ಅಂತರಂಗದ ನಿರವಯವದು; ಅಂಗವೆ ಬಹಿರಂಗದ ಸಾವಯವದು, ಜಂಗಮವೆ ಅಂತರಂಗದ ನಿರವಯವದು, ಬಹಿರಂಗದ ಸಾವಯವದು ಮಾಂಸದೃಷ್ಟಿ ಎಂಬ ಹೆಸರು ನೋಡಾ ಅಂತರಂಗ ಬಹಿರಂಗ ಈ ಉಭಯ ಒಂದಾದಡೆ ಅದು ಅಭೇದ್ಯ, ಕೂಡಲಚೆನ್ನಸಂಗಾ, ನಿಮ್ಮಲ್ಲಿ.