Index   ವಚನ - 1588    Search  
 
ಲಿಂಗಾಂಗಿಗಳಲ್ಲಿ ಹೊಲೆಸೂತಕವ ಕಲ್ಪಿಸುವನ್ನಕ್ಕ ಪ್ರಾಣಲಿಂಗಸಂಬಂಧಿಯಲ್ಲ. ಜಂಗಮದಲ್ಲಿ ಕುಲಸೂತಕವ ಹಿಡಿವನ್ನಕ್ಕ ಶಿವಾಚಾರಯುಕ್ತನಾದ ಭಕ್ತಾನುಭಾವಿಯಲ್ಲ. ಪ್ರಸಾದದಲ್ಲಿ ಎಂಜಲಸೂತಕವ ಭಾವಿಸುವನ್ನಕ್ಕ, ಪ್ರಸಾದಿಯಲ್ಲ, ಭಕ್ತನಲ್ಲ, ಶರಣನಲ್ಲ, ಲಿಂಗೈಕ್ಯನಲ್ಲ, ಅವಂಗೆ ಲಿಂಗವಿಲ್ಲ ಕಾಣಾ ಕೂಡಲಚೆನ್ನಸಂಗಯ್ಯಾ.