Index   ವಚನ - 1587    Search  
 
ಲಿಂಗವೆ ಜಂಗಮ, ಜಂಗಮವೆ ಲಿಂಗವೆಂದು ನಂಬಿದಲ್ಲಿ ಹೊರೆ ಹುಟ್ಟಿದ ಬಳಿಕ, ಹಾಲ ಹರವಿಯೊಳಗೆ ಹುಳಿ ಹೊಕ್ಕಂತೆ ನೋಡಯ್ಯಾ! ಅಂಗದ ಮೇಲೆ ಲಿಂಗವುಳ್ಳುದೆಲ್ಲ ಸಂಗಮನಾಥದೇವರೆಂದು ನಂಬಿದ ನಂಬುಗೆಯು ಬಂದ ಶರಣರ ನಿಲವನರಿಯದಿದ್ದಲ್ಲಿ ತಪ್ಪಿತ್ತು ನೋಡಾ ಗುರುವೆ. ಸಂಗಮನಾಥ ಅಂಗವಿಡಿದು ಮನೆಗೆ ನಡೆದು ಬಂದಡೆ ದಿಮ್ಮನೆ ಇದಿರೆದ್ದು ವಂದಿಸಬೇಕು ನೋಡಯ್ಯಾ. ಕೂಡಲಚೆನ್ನಸಂಗನ ಶರಣ ಪ್ರಭುದೇವರು, ಸಿದ್ಧರಾಮಯ್ಯದೇವರು ಬಂದು ಬಾಗಿಲೊಳಗಿರಲು ಕಣ್ಣರಿಯದಿದ್ದರೂ ಕರುಳರಿಯಬೇಡವೆ ಸಂಗನಬಸವಣ್ಣಾ.