Index   ವಚನ - 1611    Search  
 
.....ವೀರಶೈವ ಸಮ್ಮತವಾಗಿ ... ಷಡ್ವಿಧ ಬ್ರಹ್ಮಾದ್ವೈತದಲ್ಲಿ ಪರವಶನಾಗಿ ಬಾಹ್ಯೋಪಚಾರಂಗಳಡಗಿ, ತನ್ನ ತಾನೇ ಬೇರ್ಪಡಿಸಿ ನಿಂದು ಅಖಂಡಮಾದ (ಪರಿ)ಯೆಂತೆಂದೊಡೆ, ಸಾಕ್ಷಿ: “ಯೋ ಹಸ್ತಪಿರೋ ನಿಜಲಿಂಗಮಿಷ್ಟಂ ವಿನ್ಯಸ್ತತಲ್ಲೀನಮನಃ ಪ್ರಸಾರಃ ಬಾಹ್ಯಕ್ರಿಯಾಸಂಕಲನಿಸ್ಪೃಹಾತ್ಮಾ, ಸಂಪೂಜಯತ್ಸಂಗ ಸ ವೀರಶೈವ” ಎಂದುದಾಗಿ, ತನ್ನ ಕರಸರೋಪೀಠಾಗ್ರದೊಳು ಮೆರೆವ ಇಷ್ಟಬ್ರಹ್ಮದಲ್ಲಿ ತೃಪ್ತನಾಗಿ ಬಾಹ್ಯವೆನ್ನದೆ ಬಾಹ್ಯಾಭ್ಯಂತರವೆನ್ನದೆ ರಾಜಯೋಗಿಯಾಗಿ ಅಲ್ಲಿ ಸೈವೆರಗಾದ ನಿಜಶರಣನಲ್ಲಿಯೆ ಸನ್ನಿಹಿತ ನಮ್ಮ ಕೂಡಲ ಚೆನ್ನಸಂಗಮದೇವ.